July 6, 2021

First staff meeting after COVID

 First staff meeting after COVID 2nd wave was held on 06-07-2021 to review online classes & discuss NAAC Pending work.July 1, 2021

ವ್ಯಾಕ್ಸಿನೇಶನ್ ಅಭಿಯಾನಎಸ್. ಎ. ಸಿ ಕಾಲೇಜಿನಲ್ಲಿ 2 ನೇ ದಿನ (01-07- 20 21 ) ವಿದ್ಯಾರ್ಥಿಗಳಿಗೆ ವ್ಯಾಕ್ಸಿನೇಶನ್ ಅಭಿಯಾನ ನೆರವೇರಿತು. ದಿನಾಂಕ 28-06-2021 ರಂದು ಸುಮಾರು 550 ವಿದ್ಯಾರ್ಥಿಗಳಿಗೆ ವ್ಯಾಕ್ಸಿನೇಶನ್ ನೀಡಿದ್ದರೆ ಇಂದು ಸುಮಾರು 300 ವಿದಾರ್ಥಿಗಳಿಗೆ ನೀಡಲಾಯಿತು. ಉಳಿದ 200 ವಿದ್ಯಾರ್ಥಿಗಳು ಈಗಾಗಲೇ ತಮ್ಮ ಗ್ರಾಮದಲ್ಲಿ vaccine ಮಾಡಿಸಿಕೊಂಡಿರುವ ಬಗ್ಗೆ ಮಾಹಿತಿ ನೀಡಿರುತ್ತಾರೆ. ಆದುದರಿಂದ ಎಲ್ಲಾ ವಿದ್ಯಾರ್ಥಿಗಳು & ಸಿಬ್ಬಂದಿ ವರ್ಗಕ್ಕೆ ಶೇ. ನೂರರಷ್ಟು vaccination ಆಗಿದೆ ಎಂದು ತಿಳಿಸುತ್ತ ಆರೋಗ್ಯ & ಉನ್ನತ ಶಿಕ್ಷಣ ಇಲಾಖೆಗೆ ಕಾಲೇಜಿನ ವತಿಯಿಂದ ಧನ್ಯವಾದಗಳು.


 

June 28, 2021

1st Day Students Vaccination Programme

 ದಿನಾಂಕ 28-06-2021 ರಂದು ಇಂದು ಜುಲೈ ಮೊದಲನೇ ವಾರದಲ್ಲಿ ಕಾಲೇಜು ಆರಂಭವಾಗುವ ಹಿನ್ನೆಲೆಯಲ್ಲಿ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿಯೇ vaccination ಹಾಕಿಸಲಾಯಿತು.


June 27, 2021

ರಾಜ್ಯಮಟ್ಟದ ಕವಿಗೋಷ್ಠಿ

ಜೂ. ೨೯ ರಂದು ರಾಜ್ಯಮಟ್ಟದ ಕವಿಗೋಷ್ಠಿ

ನಾಗಮಂಗಲ : ಪಟ್ಟಣದ ಶ್ರೀ ಆದಿಚುಂಚನಗಿರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘ ಹಾಗೂ ಸಾಂಸ್ಕೃತಿಕ ಸಮಿತಿಯ ವತಿಯಿಂದ ಜೂ. ೨೯ ರಂದು ಬೆಳಿಗ್ಗೆ ೧೦ - ೩೦ ಕ್ಕೆ ಅಂತರ್ಜಾಲದ ಮೂಲಕ ಇತ್ತೀಚೆಗೆ ಅಗಲಿದ ಜಾನಪದ ವಿದ್ವಾಂಸ ಕ.ರಾ. ಕೃಷ್ಣಸ್ವಾಮಿ, ಹಿರಿಯ ದಲಿತ ಕವಿ ಡಾ. ಸಿದ್ಧಲಿಂಗಯ್ಯ, ಹಿರಿಯ ಸಂಶೋಧಕ ಡಾ. ಹ.ಕ. ರಾಜೇಗೌಡ ಅವರಿಗೆ ನುಡಿನಮನ ಹಾಗೂ ರಾಜ್ಯ ಮಟ್ಟದ ಕವಿಗೋಷ್ಠಿ ನಡೆಯಲಿದೆ. 


ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀಶ್ರೀಶ್ರೀಡಾ.ನಿರ್ಮಲಾನಂದನಾಥಮಹಾಸ್ವಾಮೀಜಿಯವರ ಸಾನಿಧ್ಯ ವಹಿಸಲಿರುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ೮೬ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಖ್ಯಾತ ಸಾಹಿತಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ದೊಡ್ಡರಂಗೇಗೌಡ ವಹಿಸುವರು. ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಆಡಳಿತಾಧಿಕಾರಿ ಡಾ. ಎನ್.ಎಸ್. ರಾಮೇಗೌಡ, ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಕೆ. ಲೋಕೇಶ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ  ವಕೀಲ ಕೆಂಪೇಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ವಿವಿಧ ಜಿಲ್ಲೆಗಳ ಖ್ಯಾತ ಕವಿ-ಕವಿಯತ್ರಿಯರಾದ ಹೆಚ್.ಆರ್. ಸುಜಾತ, ನಾ.ಸು. ನಾಗೇಶ್, ಡಾ. ಟಿ. ಯಲ್ಲಪ್ಪ, ಡಾ. ಗೀತಾ ವಸಂತ್, ಟಿ. ಸತೀಶ್ ಜವರೇಗೌಡ, ಸ್ಮಿತಾ ಅಮೃತರಾಜ್, ಹೊ.ನಾ. ನೀಲಕಂಠೇಗೌಡ, ಡಾ. ಜಯಶ್ರೀ ಕಂಬಾರ, ಡಾ. ನಾಗರಾಜ್ ತಲಘಟ್ಟಪುರ, ಡಾ. ಕಾಂತರಾಜಪುರ ಸುರೇಶ್, ಡಾ. ಪ್ರಕಾಶ್ ಖಾಡೆ, ಮಮತಾ ಅರಸೀಕೆರೆ, ಡಾ. ಬ್ಯಾಡರಹಳ್ಳಿ ಶಿವರಾಜ್, ಡಾ. ಸತ್ಯಮಂಗಲ ಮಹದೇವ, ಕೆ.ಎಂ. ವಸುಂಧರ, ಡಾ. ಹೊಂಬಯ್ಯ ಹೊನ್ನಲಗೆರೆ ಹಾಗೂ ಉದಯೋನ್ಮುಖ ಕವಿಗಳಾದ ದಿನೇಶ್ ಹೆರಗನಹಳ್ಳಿ, ಹೆಚ್.ಆರ್. ತ್ರಿವೇಣಿ, ಕಾ.ಹು. ಚಾನ್ ಪಾಷ, ಎಂ.ಎನ್. ಮಂಜುನಾಥ್, ಎನ್.ಆರ್. ದೇವಾನಂದ್, ಟಿ.ಇ. ಅನುಷಾ, ಕೆ.ಎಸ್. ಉದಯ ಕುಮಾರ್, ಡಿ.ಪಿ. ಚಿಕ್ಕಣ್ಣ (ದಾಪುಚಿ), ಎನ್.ಸಿ. ಶಿವಕುಮಾರ್ ತಮ್ಮ ಸ್ವರಚಿತ ಕವನ ವಾಚನ ಮಾಡುವರು.