October 1, 2021

2020 ರ New Education Policy ಗೆ ಸಂಬಂಧಿಸಿದಂತೆ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಕಾರ್ಯಗಾರ ಏರ್ಪಡಿಸಲಾಗಿತ್ತು

 ನಾಗಮಂಗಲ ಪಟ್ಟಣದ ಆದಿ ಚುಂಚನಗಿರಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ AVK ಮಹಿಳಾ ಕಾಲೇಜಿನ ಸಹಯೋಗದೊಂದಿಗೆ 2020 ರ New Education Policy ಗೆ ಸಂಬಂಧಿಸಿದಂತೆ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಕಾರ್ಯಗಾರ ಏರ್ಪಡಿಸಲಾಗಿತ್ತು. ಕಾಲೇಜು ಶಿಕ್ಷಣ ಇಲಾಖೆಯ ಮೈಸೂರಿನ ಪ್ರಾದೇಶಿಕ ಜಂಠಿ ನಿರ್ದೇಶಕರಾದ ಕೆ.ಸಿ. ವೀರಭದ್ರಯ್ಯ ನವರು ಕಾರ್ಯಕ್ರಮ ಉದ್ಘಾಟಿಸಿದರು. ಎ.ವಿ. ಕೆ. ಕಾಲೇಜಿನ ಪ್ರಾಂಶುಪಾಲರಾದ ಡಾ.ಸುರೇಶ್ ಕುಮಾರ್ & ಸಹಾಯಕ ಪ್ರಾಧ್ಯಾಪಕರಾದ ಡಾ.ರವಿ ಕುಮಾರ್ ರವರು ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡಿದರೆ, ಶ್ರೀ ಆದಿ ಚುಂಚನಗಿರಿ ಶಿಕ್ಷಣ ಟ್ರಸ್ಟಿನ CEO ಡಾ.ಎನ್.ಎಸ್ ರಾಮೇಗೌಡರು ಕಾಲೇಜಿನ ಅರ್ಧ ವಾರ್ಷಿಕ " .Newsletter '' ಅನ್ನು ಬಿಡುಗಡೆ ಮಾಡಿ 4 ವರ್ಷದ ಪದವಿಯ ಮಹತ್ವ ಕುರಿತು ಮಾತನಾಡಿದರು.

ಶ್ರೀ ಆದಿ ಚುಂಚನಗಿರ ಕಲಾ, ವಾಣಿಜ್ಯ & ವಿಜ್ಞಾನ ಕಾಲೇಜು ಹಾಸನದ ಪ್ರತಿಷ್ಠಿತ ಕಾಲೇಜಾದ AVK ಮಹಿಳಾ ಕಾಲೇಜಿನೊಂದಿಗೆ MOU ಮಾಡಿಕೊಂಡು ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳನ್ನು ಎರಡೂ ಕಾಲೇಜುಗಳು ಹಂಚಿಕೊಳ್ಳುವ Charter ಗೆ ಸಹಿಮಾಡಿವೆ.
ಕಾರ್ಯಕ್ರಮದ ನಂತರ ಎಲ್ಲಾ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ID Card, Buspass & Uniform ಗಳನ್ನು ವಿತರಿಸಲಾಯಿತು.
ವಿದ್ಯಾರ್ಥಿಗಳು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡರು.